Request for Proposals: Artists for projects in Government schools in Karnataka | Application Deadline: June 30, 2024

ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್
ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಕಲಾ ಸಂಯೋಜಿತ ಯೋಜನೆಗಳನ್ನು ನಡೆಸಲು
ಕಲಾವಿದರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ

ಪ್ರಸ್ತಾವನೆಗಳನ್ನು ಸಲ್ಲಿಸಲು ಕಡೆಯ ದಿನಾಂಕ: June 30, 2024

Request for Proposals: Artists for projects in Government schools in Karnataka
Application Deadline: June 30, 2024
Click here to read the call in English

ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ಕಲಾಸಂಯೋಜಿತ ಯೋಜನೆಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎಫ್ಎ) ಸಂಸ್ಥೆಯು ಈ ಯೋಜನೆಗಳ ಸುಗಮಕಾರರಾಗಿ ಭಾಗಿಯಾಗಲು ಕಲಾವಿದರಿಂದ ಪ್ರಸ್ತಾವನೆಗಳನ್ನು ಕೋರುತ್ತಿದೆ. ಈ ಯೋಜನೆಗಳಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಒಪ್ಪಿಗೆ ಇರುತ್ತದೆ. 

ಕಲಿ ಕಲಿಸು ಅನ್ನುವುದು ಪಠ್ಯಬೋಧನಾ ಕಾರ್ಯದಲ್ಲಿ ಕಲಾವಿದರು ಕಲಾ ಮಾಧ್ಯಮವನ್ನು ಅಳವಡಿಸಿಕೊಳ್ಳುವುದರ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆ ಎಂಬುದನ್ನು ನಿರಂತರ ಕ್ರಿಯೆಯಾನ್ನಾಗಿಸುವ ಪ್ರಯತ್ನ. ಕತೆ, ಹಾಡು, ನಾಟಕ, ಚಿತ್ರಕಲೆ ಮತ್ತು ಯಾವುದೇ ಸ್ಥಳೀಯ ಕಲಾ ಪ್ರಕಾರಗಳ ಮುಖಾಂತರ ಶಾಲಾ ಕೊಠಡಿಯನ್ನು ದಾಟಿ ಹೊರ ಜಗತ್ತಿನೊಂದಿಗೆ ವಿಶೇಷವಾದ ಸಂಬಂಧವಂದನ್ನು ಗಟ್ಟಿಯಾಗಿ ಕಟ್ಟಿಕೊಡುವ ಸೃಜನಶೀಲ ನಡೆ, ಹಾಗು ಪಠ್ಯಕ್ರಮಗಳ ಸಂಯೋಜಿತ ಪ್ರಯತ್ನಗಳಿಂದ ವಿದ್ಯಾರ್ಥಿ ಕೇಂದ್ರೀಕೃತ ಕಲಿಕಾ ವ್ಯವಸ್ಥೆಯನ್ನು ತರುವ ಆಸೆ.

ಮೇಲಿನ ಉದ್ದೇಶಗಳನ್ನು ಆಧರಿಸಿ, ಐಎಫ್ಎಯು ಯೋಜನೆಯ ಪ್ರಸ್ತಾವನೆಗಳನ್ನು ಕೋರುತ್ತಿದೆ. ಶಾಲಾ ಪಠ್ಯಕ್ರಮಗಳಿಗೆ ಪೂರಕವಾಗಿ ಕಾರ್ಯಗೊಳ್ಳುವ ಈ ಯೋಜನೆಗಳು ಕಲಾಸಂಯೋಜಿತ ಬೋಧನಾಕ್ರಮಗಳಿಗೆ ಭದ್ರವಾದ ಬುನಾದಿಯನ್ನು ನಿರ್ಮಿಸಿಕೊಡಬೇಕು. ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಸಂಶೋಧನಾ ಗುಣವನ್ನು ಪ್ರೋತ್ಸಾಹಿಸುವ ಕಲಾ ಸಂಯೋಜಿತ ಕಾರ್ಯಯೋಜನೆಗಳನ್ನು ತಮ್ಮ ಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ತಿಳಿಸುವುದು ಅಪೇಕ್ಷಣೀಯ.

ಕಳೆದ ವರ್ಷಗಳ ಯೋಜನೆಗಳ ಮಾಹಿತಿ ಪಡೆಯಲು ಈ ಲಿಂಕ್ ನ್ನು ಒತ್ತಿ.

ರಾಧಿಕಾ ಭಾರದ್ವಾಜ್ (ಕಾರ್ಯಕ್ರಮ ನಿರ್ವಾಹಕರು, ಕಲಾ ಶಿಕ್ಷಣ)
ಕಲಾ ಶಿಕ್ಷಣದ ಕಲಿ ಕಲಿಸು ಯೋಜನೆಯಡಿಯಲ್ಲಿ ಪ್ರಸ್ತಾವನೆಗಳನ್ನು ಕಳುಹಿಸಲು ಕಲಾವಿದರನ್ನು ಆಹ್ವಾನಿಸಿದ್ದಾರೆ

ಯೋಜನೆಗಳ ಪ್ರಸ್ತಾವನೆಗಳನ್ನು ಯಾರು ಸಲ್ಲಿಸಬಹುದು?

  • ಕಲಾ ಶಿಕ್ಷಣದಲ್ಲಿ ಪೂರ್ವಾನುಭವ ಇರುವ ಕಲಾವಿದರು ಅಥವಾ ಕಲಾಶಿಕ್ಷಣದಲ್ಲಿ ಸೂಕ್ತವಾದ ತರಬೇತಿ ಪಡೆದವರು ಪ್ರಸ್ತಾವನೆಗಳನ್ನು ಸಲ್ಲಿಸಬಹುದು.
  • ಸ್ಥಳೀಯ ಭಾಷೆಯನ್ನು ಬಲ್ಲವರಾಗಿರಬೇಕು.
  • ಭಾರತೀಯ ಪ್ರಜೆಗಳಾಗಿರಬೇಕು.

ಅರ್ಹತಾ ಮಾನದಂಡಗಳನ್ನು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಲಿಂಕ್ ಈ ಅನ್ನು ಒತ್ತಿ.

ಯೋಜನೆಯ ವ್ಯಾಪ್ತಿ:

ಕಾರ್ಯಗತಗೊಳಿಸಲು ಬಯಸುವ ಯೋಜನೆಗಳು ಕೆಳಕಂಡ ಯಾವುದಾದರು ಅಂಶಗಳನ್ನು ಸ್ಪಷ್ಟವಾಗಿ ಒಳಗೊಂಡಿರಬೇಕು.

  • ಯೋಜನೆಯ ಪರಿಧಿಯಲ್ಲಿ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು, ಕಲಾಸೇವೆಯಲ್ಲಿ ತೊಡಗಿರುವವರು ಹೀಗೆ ಇನ್ನೂ ಹಲವು ಪಾಲುದಾರರು ಭಾಗವಹಿಸುವಂತಿರಬೇಕು.
  • ತರಗತಿಯ ಬೋಧನಾ ಕ್ರಮಗಳಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಅಥವಾ ಕಲಾ ಪ್ರಕಾರಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನಗಳಾಗಿರಬೇಕು. 
  • ಯೋಜನೆಯು, ವಿದ್ಯಾರ್ಥಿ ಕೇಂದ್ರಿತ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಂಗಕಲೆ, ಸಂಗೀತ, ಜಾನಪದ, ದೃಶ್ಯಕಲೆ, ಛಾಯಾಚಿತ್ರ ಕಲೆ, ಚಲನಚಿತ್ರ, ಸಾಹಿತ್ಯ ಕಲೆಯಲ್ಲದೆ ಯಾವುದಾದರೂ ಒಂದು ಕಲೆಯನ್ನು ವಿಶೇಷವಾಗಿ ಅಭ್ಯಸಿಸುವಂಥದ್ದಾಗಿರಬೇಕು.
  • ಯೋಜನೆಯು ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂಬಂಧಿ ಅರಿವು ಮೂಡಿಸಲು ಶಾಲಾ ಸಮುದಾಯವನ್ನು ಪ್ರೇರೇಪಿಸುವಲ್ಲಿ ಸಹಕಾರಿಯಾಗಬೇಕು.

ಇದಲ್ಲದೆ ಇನ್ನಿತರ ಅಲ್ಪಾವಧಿ ಅಥವ ದೀರ್ಘಾವಧಿಯ ನೂತನ ಮತ್ತು ಸೃಜನಶೀಲ ಕಲಾ ಶಿಕ್ಷಣ ಯೋಜನೆಗಳನ್ನು ಸಹ ಪರಿಗಣಿಸಲಾಗುವುದು.

ಯೋಜನಾ ಪ್ರಸ್ತಾವನೆ ಸಲ್ಲಿಸುವ ವಿಧಾನ:

  • ನಿಮ್ಮ ಯೋಜನೆಯನ್ನು ಕನ್ನಡ, ಉರ್ದು, ಹಿಂದಿ, ಮರಾಠಿ, ತೆಲುಗು ಹಾಗು ಇಂಗ್ಲಿಷ್ ಭಾಷೆಯಲ್ಲಿ ಬರೆಯಬಹುದು.
  • ಯೋಜನೆಯು ಒಂದು ವರ್ಷದ ಕಾಲಾವಧಿಯನ್ನು ಹೊಂದಿರಬೇಕು.
  • ಯೋಜನೆಗೆ ಸಂಬಂದಪಟ್ಟ ಪ್ರಶ್ನೆಗಳಿದ್ದಲ್ಲಿ, ನಿಮ್ಮ ಹೊಳಹುಗಳ ಬಗ್ಗೆ ಚರ್ಚಿಸ ಬಯಸಿದಲ್ಲಿ ಅಥವಾ ನಿಮ್ಮ ಕರಡು ಪ್ರಸ್ತಾವನೆಯನ್ನು ನಮಗೆ  ಕಳುಹಿಸ ಬಯಸಿದಲ್ಲಿ, May 31, 2024ರ ಒಳಗೆ ನಮ್ಮನ್ನು ಸಂಪರ್ಕಿಸಿ.
  • ನಿಮ್ಮ ಅಂತಿಮ ಪ್ರಸ್ತಾವನೆಯು ಇಮೇಲ್ ಮೂಲಕ, June 30, 2024ರ ಒಳಗೆ ನಮಗೆ ಸೇರಬೇಕು.
  • ಕೊನೆಯ ಸುತ್ತಿಗೆ ಆಯ್ಕೆಯಾದ ಪ್ರಸ್ತಾವನೆಗಳನ್ನು ಬಾಹ್ಯ ತಜ್ಞರ ಆಯ್ಕೆ ಸಮಿತಿ ಮೌಲ್ಯಮಾಪನ ಮಾಡುತ್ತದೆ. ಇದಕ್ಕಾಗಿ ಅರ್ಚಿದಾರರು ತಮ್ಮ ಯೋಜನೆಯ ಪರಿಕಲ್ಪನೆಯನ್ನು ಈ ಸಮಿತಿಯ ಮುಂದೆ ಪ್ರತಿಪಾದಿಸಬೇಕಾಗುತ್ತದೆ.  
  • August 2024 ತಿಂಗಳಲ್ಲಿ ಕಾರ್ಯಗತಗೊಳಿಸಲು ಆಯ್ಕೆಯಾದ ಯೋಜನೆಗಳ ಪಟ್ಟಿಯನ್ನು ನಿರೀಕ್ಷಿಸಬಹುದು. 

ನಿಮ್ಮ ಅಂತಿಮ ಪ್ರಸ್ತಾವನೆಯು ಈ ಕೆಳಕಂಡ ಕನಿಷ್ಠ ವಿಷಯಗಳ ವಿವರಗಳನ್ನು ಒಳಗೊಂಡಿರಬೇಕು:

  • ಯೋಜನೆಯನ್ನು ಕೈಗೊಳ್ಳಲು ವಿನಂತಿ ಪತ್ರ.
  • ನಿಮ್ಮ ವಯಕ್ತಿಕ ಪರಿಚಯದ ಜೊತೆಗೆ ಮಕ್ಕಳೊಂದಿಗೆ ಕೆಲಸ ಮಾಡಿದ ನಿಮ್ಮ ಅನುಭವ. 
  • ನೀವು ಆಯ್ಕೆ ಮಾಡಿಕೊಂಡ ಶಾಲೆಯ ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಜೊತೆಗೆ ಶಾಲೆಯ ಹೆಸರು, ವಿಳಾಸ, ಹಿನ್ನೆಲೆ, ಸಹಶಿಕ್ಷಕರ ಸಾಮರ್ಥ್ಯಗಳ ವಿವರಗಳು. 
  • ನೀವು ಆಯ್ಕೆ ಮಾಡಿಕೊಂಡ ಶಾಲೆಯ ಪ್ರಸ್ತುತ ಕಲಾ ಶಿಕ್ಷಣ ಚಟುವಟಿಕೆಗಳು ಯಾವುದಾದರೂ ಇದ್ದರೆ ಅವುಗಳ ಸಂಕ್ಷಿಪ್ತ ಮಾಹಿತಿ.  
  • ಆಯ್ಕೆ ಮಾಡಿಕೊಂಡ ಶಾಲೆಯ ಮುಖ್ಯೋಪಾಧ್ಯಾಯರ ಒಪ್ಪಿಗೆ ಪತ್ರದ ಜೊತೆಗೆ ಶಾಲೆಯ ಸಂಪರ್ಕ ಬಿಂದುವಿನ ಹೆಸರು ಮತ್ತು ದೊರವಾಣಿ ಸಂಖ್ಯೆ.
  • ಯೋಜನೆಯ ಉದ್ದೇಶಗಳು.
  • ಕಾರ್ಯ ಯೋಜನೆಗಳ ವಿವರ.
  • ಯೋಜನಾವಧಿಯಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳ/ ಸಮುದಾಯದವರ ವಿವರ.
  • ಯೋಜನೆಯಿಂದ ಬರಬಹುದಾದ ಅಪೇಕ್ಷಿತ ಫಲಿತಾಂಶಗಳು.
  • ಖರ್ಚು - ವೆಚ್ಚಗಳ ವಿವರ.

ಬಜೆಟ್:

  • ಗರಿಷ್ಠ ರೂ. 2,00,000/- ವರೆಗೆ.
  • ಪ್ರಸ್ತಾವನೆಯನ್ನು ಸಲ್ಲಿಸುವವರು ಗರಿಷ್ಠ  ರೂ. 70,000/- ವರೆಗೆ ಸ್ವಯಂ ಶುಲ್ಕವನ್ನಾಗಿ ಪರಿಗಣಿಸಬಹುದು. 

ಪ್ರಸ್ತಾವನೆಯ ಸಲ್ಲಿಕೆ:

  • ನಿಮ್ಮ ಅಂತಿಮ ಪ್ರಸ್ತಾವನೆಯು 25 MB ಯ ಒಳಗಿದ್ದು, ಇಮೇಲ್ ಮೂಲಕ ರಾಧಿಕಾ ಭಾರದ್ವಾಜ್, ಕಾರ್ಯಕ್ರಮ ಅಧಿಕಾರಿಗಳು, ಕಲಾ ಶಿಕ್ಷಣ ಇವರಿಗೆ radhika@indiaifa.org ಕಳುಹಿಸಿಕೊಡಿ.
  • ನಿಮ್ಮ ಇಮೇಲ್ ವಿಷಯ ಇಂತಿರಲಿ: ‘ಕಲಾ ಶಿಕ್ಷಣದಡಿ ಯೋಜನೆಯ ಪ್ರಸ್ತಾವನೆ (ಕಲಾವಿದರು)’.
  • ದೂರವಾಣಿ ಸಂಖ್ಯೆ: 7829327739 (ದಯವಿಟ್ಟು ಸೋಮವಾರದಿಂದ ಶುಕ್ರವಾರ ಬೆಳಗ್ಗೆ 10 ರಿಂದ ಸಂಜೆ 5ರ ಒಳಗೆ ಕರೆ ಮಾಡಿ).

ಅಪೂರ್ಣ ಪ್ರಸ್ತಾವನೆಗಳು ಮತ್ತು ಅರ್ಹತಾ ಮಾನದಂಡಗಳ ಪಟ್ಟಿಯಲ್ಲಿ ಸೇರದ ಅರ್ಜಿದಾರರನ್ನು ಕಡೆಗಣಿಸಲಾಗುವುದು.

ಎಲ್ಲಾ ಆಯ್ಕೆಯಾದ ಯೋಜನೆಗಳನ್ನು ಐ.ಎಫ್.ಎ ಸಂಸ್ಥೆ ಕಾರ್ಯಗತಗೊಳಿಸುತ್ತದೆ.

ಮಕ್ಕಳ ಗೌರವ ಹಾಗು ಯೋಗಕ್ಷೇಮವನ್ನು ಕಾಪಾಡುವುದರ ಜೊತೆಗೆ ಅವರಿಗೆ ಸುಭದ್ರ ವಾತಾವರಣವನ್ನು ನಿರ್ಮಿಸಿಕೊಡುವುದಕ್ಕೆ IFA ಬದ್ಧವಾಗಿರುತ್ತದೆ. ಪ್ರಸ್ತಾವನೆಯನ್ನು ಸಲ್ಲಿಸುವವರು ಇದನ್ನು ಪಾಲಿಸಬೇಕು ಮತ್ತು ಎಲ್ಲಾ ಸಮಯದಲ್ಲೂ ಅನುಸರಿಸಬೇಕು.

ಚಿತ್ರ ಕೃಪೆ: ಸಂತೋಷ್ ಡಿ ಡಿ

For more information on Kali-Kalisu click here