Request for Proposals: Teachers for projects in Government schools in Karnataka | Deadline Extended: September 15, 2026

ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎಫ್ಎ)
ಕರ್ನಾಟಕ ಸರ್ಕಾರಿ ಶಾಲೆಗಳ ಶಿಕ್ಷಕ/ಶಿಕ್ಷಕಿಯರಿಂದ ಕಲಾ ಸಂಯೋಜಿತ ಯೋಜನಾ
ಪ್ರಸ್ತಾವನೆಗಳನ್ನು ಆಹ್ವಾನಿಸಿದೆ
ಪ್ರಸ್ತಾವನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ: September 15, 2026
Request for Proposals: Teachers for Projects in Government Schools in Karnataka
Deadline Extended: September 15, 2026
Click here to read the call in English
ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ಕಲಾಸಂಯೋಜಿತ ಯೋಜನೆಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎಫ್ಎ) ಸಂಸ್ಥೆಯು ಈ ಯೋಜನೆಗಳ ಸುಗಮಕಾರರಾಗಿ ಭಾಗಿಯಾಗಲು ಶಾಲಾ ಶಿಕ್ಷಕರುಗಳಿಂದ ಪ್ರಸ್ತಾವನೆಗಳನ್ನು ಕೋರುತ್ತಿದೆ.
ಕಲಿ ಕಲಿಸು ಅನ್ನುವುದು ಪಠ್ಯಬೋಧನಾ ಕಾರ್ಯದಲ್ಲಿ ಶಿಕ್ಷಕರು ಕಲಾ ಮಾಧ್ಯಮವನ್ನು ಅಳವಡಿಸಿಕೊಳ್ಳುವುದರ ಜೊತೆಯಲ್ಲೇ ವಿದ್ಯಾರ್ಥಿಗಳಲ್ಲಿ ಕಲಿಕೆ ಎಂಬುದನ್ನು ನಿರಂತರ ಕ್ರಿಯೆಯಾನ್ನಾಗಿಸುವ ಪ್ರಯತ್ನ. ಕತೆ, ಹಾಡು, ನಾಟಕ, ಚಿತ್ರಕಲೆ ಮತ್ತು ಯಾವುದೇ ಸ್ಥಳೀಯ ಕಲಾಪ್ರಕಾರಗಳ ಮುಖಾಂತರ ಶಾಲಾ ಕೊಠಡಿಯನ್ನು ದಾಟಿ ಹೊರಜಗತ್ತಿನೊಂದಿಗೆ ವಿಶೇಷವಾದ ಸಂಬಂಧವಂದನ್ನು ಗಟ್ಟಿಯಾಗಿ ಕಟ್ಟಿಕೊಡುವ ಸೃಜನಶೀಲ ನಡೆ ಹಾಗು ಪಠ್ಯಕ್ರಮಗಳ ಸಂಯೋಜಿತ ಪ್ರಯತ್ನಗಳಿಂದ ವಿದ್ಯಾರ್ಥಿ ಕೇಂದ್ರೀಕೃತ ಕಲಿಕಾ ವ್ಯವಸ್ಥೆಯನ್ನು ತರುವ ಆಸೆ.
ಮೇಲಿನ ಉದ್ದೇಶಗಳನ್ನು ಆಧರಿಸಿ, ಐಎಫ್ಎಯು ಯೋಜನೆಯ ಪ್ರಸ್ತಾವನೆಗಳನ್ನು ಕೋರುತ್ತಿದೆ. ಶಾಲಾ ಪಠ್ಯಕ್ರಮಗಳಿಗೆ ಪೂರಕವಾಗಿ ಕಾರ್ಯಗೊಳ್ಳುವ ಈ ಯೋಜನೆಗಳು ಕಲಾ ಸಂಯೋಜಿತ ಬೋಧನಾಕ್ರಮಗಳಿಗೆ ಭದ್ರವಾದ ಬುನಾದಿಯನ್ನು ನಿರ್ಮಿಸಿಕೊಡಬೇಕು. ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಸಂಶೋಧನಾ ಗುಣವನ್ನು ಪ್ರೋತ್ಸಾಹಿಸುವ ಕಲಾ ಸಂಯೋಜಿತ ಕಾರ್ಯಯೋಜನೆಗಳನ್ನು ತಮ್ಮ ಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ತಿಳಿಸುವುದು ಅಪೇಕ್ಷಣೀಯ.
ಕಳೆದ ವರ್ಷಗಳ ಯೋಜನೆಗಳ ಮಾಹಿತಿ ಪಡೆಯಲು ಈ ಲಿಂಕ್ ಅನ್ನು ಒತ್ತಿ.
ಯೋಜನೆಯ ವ್ಯಾಪ್ತಿ:
ಕಾರ್ಯಗತಗೊಳಿಸಲು ಬಯಸುವ ಯೋಜನೆಗಳು ಕೆಳಕಂಡ ಯಾವುದಾದರು ಅಂಶಗಳನ್ನು ಸ್ಪಷ್ಟವಾಗಿ ಒಳಗೊಂಡಿರಬೇಕು.
- ಯೋಜನೆಯ ವ್ಯಾಪ್ತಿಯಲ್ಲಿ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು, ಕಲಾಸೇವೆಯಲ್ಲಿ ತೊಡಗಿರುವವರು ಹೀಗೆ ಇನ್ನೂ ಹಲವು ಪಾಲುದಾರು ಭಾಗವಹಿಸುವಂತಿರಬೇಕು.
- ತರಗತಿಯ ಬೋಧನಾ ಕ್ರಮಗಳಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಅಥವಾ ಕಲಾ ಪ್ರಕಾರಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನಗಳಾಗಿರಬೇ
ಕು. - ಯೋಜನೆಯು, ವಿದ್ಯಾರ್ಥಿ ಕೇಂದ್ರಿತ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಂಗಕಲೆ, ಸಂಗೀತ, ಜಾನಪದ, ದೃಶ್ಯಕಲೆ, ಛಾಯಾಚಿತ್ರ ಕಲೆ, ಚಲನಚಿತ್ರ, ಸಾಹಿತ್ಯ ಕಲೆಯಲ್ಲದೆ ಯಾವುದಾದರೂ ಒಂದು ಕಲೆಯನ್ನು ವಿಶೇಷವಾಗಿ ಅಭ್ಯಸಿಸುವಂಥದ್ದಾಗಿರಬೇಕು.
- ಯೋಜನೆಯು ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂಬಂಧಿ ಅರಿವು ಮೂಡಿಸಲು ಶಾಲಾ ಸಮುದಾಯವನ್ನು ಪ್ರೇರೇಪಿಸುವಲ್ಲಿ ಸಹಕಾರಿಯಾಗಬೇಕು.
ಇದಲ್ಲದೆ ಇನ್ನಿತರ ಅಲ್ಪಾವಧಿ ಅಥವ ದೀರ್ಘಾವಧಿಯ ನೂತನ ಮತ್ತು ಸೃಜನಶೀಲ ಕಲಾಶಿಕ್ಷಣ ಯೋಜನೆಗಳನ್ನು ಸಹ ಪರಿಗಣಿಸಲಾಗುವುದು.
ಯೋಜನೆಯ ಅವಧಿ:
ನಿಮ್ಮ ಯೋಜನೆಯು ಹದಿನೈದು ತಿಂಗಳ ಅವಧಿಯನ್ನು ಹೊಂದಿರಬೇಕು.
ಬಜೆಟ್:
- ಗರಿಷ್ಠ ರೂ. 1,00,000/- ವರೆಗೆ.
- ಪ್ರಸ್ತಾವನೆಯನ್ನು ಸಲ್ಲಿಸುವವರು ಗರಿಷ್ಠ ರೂ. 35,000/- ವರೆಗೆ ಸ್ವಯಂ ಶುಲ್ಕವನ್ನಾಗಿ ಪರಿಗಣಿಸಬಹುದು.
ಯೋಜನೆಗಳ ಪ್ರಸ್ತಾವನೆಗಳನ್ನು ಯಾರು ಸಲ್ಲಿಸಬಹುದು?
- ಕಲಾ ಶಿಕ್ಷಣದಲ್ಲಿ ಪೂರ್ವ ಅನುಭವ ಅಥವಾ ಸಂಬಂಧಿತ ತರಬೇತಿ ಹೊಂದಿರುವ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮತ್ತು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು.
- ಸ್ಥಳೀಯ ಭಾಷೆಯನ್ನು ಬಲ್ಲವರಾಗಿರಬೇಕು.
- ಭಾರತೀಯ ಪ್ರಜೆಗಳಾಗಿರಬೇಕು.
ಅರ್ಹತಾ ಮಾನದಂಡಗಳನ್ನು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಲಿಂಕ್ ಅನ್ನು ಒತ್ತಿ.
ಯೋಜನಾ ಪ್ರಸ್ತಾವನೆ ಸಲ್ಲಿಸುವ ವಿಧಾನ:
- ಯೋಜನೆಯನ್ನು ಕನ್ನಡ, ಉರ್ದು, ಹಿಂದಿ, ಮರಾಠಿ, ತೆಲುಗು, ತಮಿಳು ಹಾಗು ಇಂಗ್ಲಿಷ್ ಭಾಷೆಯಲ್ಲಿ ಬರೆಯಬಹುದು.
- ಯೋಜನೆಯನ್ನು ಕೈಗೊಳ್ಳಲು ವಿನಂತಿ ಪತ್ರ.
- ನಿಮ್ಮ ವಯಕ್ತಿಕ ಪರಿಚಯ.
- ವಯಕ್ತಿಕ ಹಿನ್ನೆಲೆ, ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಜೊತೆಗೆ ಶಾಲೆಯ ಹೆಸರು, ವಿಳಾಸ, ಸಹಶಿಕ್ಷಕರ ಸಾಮರ್ಥ್ಯಗಳ ವಿವರಗಳು.
- ಶಾಲೆಯ ಪ್ರಸ್ತುತ ಕಲಾ ಶಿಕ್ಷಣ ಚಟು
ವಟಿಕೆಗಳು ಯಾವುದಾದರೂ ಇದ್ದರೆ ಅವುಗಳ ಸಂಕ್ಷಿಪ್ತ ಮಾಹಿತಿ. - ಯೋಜನೆಯ ಉದ್ದೇಶಗಳು.
- ಕಾರ್ಯ ಯೋಜನೆಗಳ ವಿವರ.
- ಯೋಜನೆಯಲ್ಲಿ ಶಾಲೆಯ ಸಹೋದ್ಯೋಗಿಗಳ ಪಾತ್ರ.
- ಯೋಜನಾವಧಿಯಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳ ವಿವರ.
- ಯೋಜನೆಯಿಂದ ಬರಬಹುದಾದ ಅಪೇಕ್ಷಿತ ಫಲಿತಾಂಶಗಳು.
- ಖರ್ಚು-ವೆಚ್ಚಗಳ ವಿವರ.
ನಿಮ್ಮ ಅಂತಿಮ ಪ್ರಸ್ತಾವನೆಯು 25 MBಯ ಒಳಗಿದ್ದು, ಇಮೇಲ್ ಮೂಲಕ ದೀಪಕ್ ಡಿ ಎಚ್, ಕಾರ್ಯಕ್ರಮ ಅಧಿಕಾರಿಗಳು, ಕಲಾ ಶಿಕ್ಷಣ ಇವರಿಗೆ deepak@indiaifa.org ಕಳುಹಿಸಿಕೊಡಿ.
ನಿಮ್ಮ ಇಮೇಲ್ ವಿಷಯ ಇಂತಿರಲಿ: ‘ಕಲಾ ಶಿಕ್ಷಣದಡಿ ಯೋಜನೆಯ ಪ್ರಸ್ತಾವನೆ (ಶಿಕ್ಷಕ/ಶಿಕ್ಷಕಿಯರು)’. ದೂರವಾಣಿ ಸಂಖ್ಯೆ: 9739175525 (ದಯವಿಟ್ಟು ಸೋಮವಾರದಿಂದ ಶುಕ್ರವಾರದ ಒಳಗೆ ಬೆಳಗ್ಗೆ 10:00ರಿಂದ ಸಂಜೆ 05:00ರ ಒಳಗೆ ಕರೆ ಮಾಡಿ).
ಅಪೂರ್ಣ ಪ್ರಸ್ತಾವನೆಗಳು ಮತ್ತು ಅರ್ಹತಾ ಮಾನದಂಡಗಳ ಪಟ್ಟಿಯಲ್ಲಿ ಸೇರದ ಅರ್ಜಿದಾರರನ್ನು ಕಡೆಗಣಿಸಲಾಗುವುದು.
ಆಯ್ಕೆ ಪ್ರಕ್ರಿಯೆ:
ಕೊನೆಯ ಸುತ್ತಿಗೆ ಆಯ್ಕೆಯಾದ ಪ್ರಸ್ತಾವನೆಗಳನ್ನು ಬಾಹ್ಯ ತಜ್ಞರ ಆಯ್ಕೆ ಸಮಿತಿ ಮೌಲ್ಯಮಾಪನ ಮಾಡುತ್ತದೆ. ಇದಕ್ಕಾಗಿ ಅರ್ಜಿದಾರರು ತಮ್ಮ ಯೋಜನೆಯ ಪರಿಕಲ್ಪನೆಯನ್ನು ಈ ಸಮಿತಿಯ ಮುಂದೆ ಪ್ರತಿಪಾದಿಸಬೇಕಾಗುತ್ತದೆ.
ಎಲ್ಲಾ ಆಯ್ಕೆಯಾದ ಯೋಜನೆಗಳನ್ನು ಐ.ಎಫ್.ಎ ಸಂಸ್ಥೆ ಕಾರ್ಯಗತಗೊಳಿಸುತ್ತದೆ.
ಪ್ರಮುಖ ದಿನಾಂಕಗಳು:
- ನಿಮ್ಮ ಅಂತಿಮ ಪ್ರಸ್ತಾವನೆಯು ಇಮೇಲ್ ಮೂಲಕ: September 15, 2026ರ ಒಳಗೆ ನಮಗೆ ಸೇರಬೇಕು.
- November 2026 ಕ್ಕೆ ಆಯ್ಕೆಯಾದ ಯೋಜನೆಗಳ ಪಟ್ಟಿಯನ್ನು ನಿರೀಕ್ಷಿಸಬಹುದು.
ಮಕ್ಕಳ ಗೌರವ ಹಾಗು ಯೋಗಕ್ಷೇಮವನ್ನು ಕಾಪಾಡುವುದರ ಜೊತೆಗೆ ಅವರಿಗೆ ಸುಭದ್ರ ವಾತಾವರಣವನ್ನು ನಿರ್ಮಿಸಿಕೊಡುವುದಕ್ಕೆ IFA ಬದ್ಧವಾಗಿರುತ್ತದೆ. ಪ್ರಸ್ತಾವನೆಯನ್ನು ಸಲ್ಲಿಸುವವರು ಇದನ್ನು ಪಾಲಿಸಬೇಕು ಮತ್ತು ಎಲ್ಲಾ ಸಮಯದಲ್ಲೂ ಅನುಸರಿಸಬೇಕು.
For more information on Kali Kalisu, click here
